1. Home
  2. ಸಮುದಾಯದ ಮಾರ್ಗಸೂಚಿಗಳು

ಸಮುದಾಯದ ಮಾರ್ಗಸೂಚಿಗಳು

ನಿಮ್ಮ ಜೀವನದಲ್ಲಿ ಮಹತ್ವದ ಕ್ಷಣಗಳನ್ನು ನೇರವಾಗಿ ನಿಮ್ಮ ಸ್ಮಾರ್ಟ್‍ಫೋನ್‍ನಿಂದಲೇ ಸೆರೆಹಿಡಿಯಲು ಮತ್ತು ಹಂಚಿಕೊಳ್ಳಲು TikTok ನಿಮಗೆ ಅವಕಾಶನೀಡುತ್ತದೆ. ಕಿರು ವೀಡಿಯೊಗಳ ಮೂಲಕ ನಿಮ್ಮ ಸೃಜನಶೀಲ ಆಲೋಚನೆಗಳನ್ನು ವ್ಯಕ್ತಪಡಿಸುತ್ತಾ, ಭಿನ್ನತೆಗಳನ್ನು ವ್ಯಕ್ತಪಡಿಸುವಾಗ ಸಾಮಾನ್ಯ ನೆಲೆಯನ್ನುಕಂಡುಕೊಳ್ಳುತ್ತಾ ಜಾಗತಿಕ TikTok ಸಮುದಾಯದ ಒಂದು ಭಾಗವಾಗಿರಿ.

ನಾವು ಕಾಲಕಾಲಕ್ಕೆ ಅಪ್‍ಡೇಟ್ ಮಾಡುವ TikTok ಸಮುದಾಯ ಮಾರ್ಗದರ್ಶಿಗಳು ಒಂದು ಸುರಕ್ಷಿತ ಮತ್ತು ಸ್ನೇಹಪೂರ್ವಕ ಪರಿಸರಕ್ಕಾಗಿ ಇರುವಮಹತ್ವದ ನಡವಳಿಕೆಯ ಸಂಹಿತೆಯಾಗಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ನಿಮ್ಮ ಖಾತೆಯನ್ನು ಮತ್ತು/ಅಥವಾ ವಿಷಯವನ್ನು ತೆಗೆದುಹಾಕಬಹುದು. ಅಷ್ಟೇ ಅಲ್ಲದೆ, ಬಳಕೆದಾರರು ಸ್ಥಳೀಯ ಕಾನೂನುಗಳನ್ನು ಸಹ ಅನುಸರಿಸಬೇಕು. ವಿಷಯವನ್ನು ಪ್ರಾಧಿಕಾರಗಳಿಗೆ, ಅನ್ವಯಿಸುವ ಕಾನೂನು ಅನುಮತಿಸುವಹಾಗೆ, ಮೇಲ್ವಿಚಾರಣೆ ಮಾಡುವ ಮತ್ತು ವರದಿ ಮಾಡುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

ನಮ್ಮ ನೀತಿಗಳು ಹಾಗೂ ಸಮುದಾಯದ ಮಾರ್ಗಸೂಚಿಗಳು ವಿಶ್ವಾಸ, ಗೌರವ ಮತ್ತು ಸಮುದಾಯದಲ್ಲಿರುವ ಎಲ್ಲರಿಗಾಗಿ ಸಕಾರಾತ್ಮಕ ಪರಿಸರವನ್ನುಬೆಳೆಸಲು ಅಸ್ತಿತ್ವವನ್ನು ಪಡೆದುಕೊಂಡಿವೆ.

ಈ ಕೆಳಗಿನವುಗಳನ್ನು TikTok ನಲ್ಲಿ ಪೋಸ್ಟ್ ಮಾಡುವುದು, ಹಂಚಿಕೊಳ್ಳುವುದು ಅಥವಾ ಪ್ರಚಾರ ಮಾಡುವುದು ಸೂಕ್ತವಾಗಿರುವುದಿಲ್ಲ, ಅವುಗಳೆಂದರೆ:

ಹಾನಿಕಾರಕ ಅಥವಾ ಅಪಾಯಕಾರಿ ವಿಷಯ

ನೀವು TikTok ಅನ್ನು ಬಳಸಿದಾಗ ನೀವೊಂದು ಜಾಗತಿಕ ಸಮುದಾಯವನ್ನು ಸೇರುತ್ತಿರುವಿರಿ. ಬೇರೆ ಬಳಕೆದಾರರಿಗೆ ಹಾನಿಯನ್ನು ಉಂಟುಮಾಡಬಹುದಾದಅಥವಾ ಹಾನಿ ಮಾಡಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬಹುದಾದ, ಅಂದರೆ ದೈಹಿಕ, ಮಾನಸಿಕ, ಹಣಕಾಸು ಅಥವಾ ಕಾನೂನು ಹಾನಿಯನ್ನುಉಂಟುಮಾಡಬಹುದಾದ ಯಾವುದೇ ವಿಷಯವನ್ನು ಪೋಸ್ಟ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ.

  • ಭಯೋತ್ಪಾದಕ ಸಂಘಟನೆಗಳು ಮತ್ತು ಯಾವುದೇ ಇತರ ಕ್ರಿಮಿನಲ್ ಸಂಘಟನೆಗಳನ್ನು TikTok ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಈಸಂಘಟಣೆಗಳನ್ನು ಅಥವಾ ವ್ಯಕ್ತಿಗಳನ್ನು ಪ್ರಚಾರ ಮಾಡಲು ಮತ್ತು ಬೆಂಬಲಿಸಲು TikTok ಅನ್ನು ಬಳಸಬೇಡಿ.
  • ಅಪಾಯಕಾರಿ ಕೃತ್ಯಗಳು, ಸ್ವಯಂ–ಹಾನಿ, ಅಥವಾ ಆತ್ಮಹತ್ಯೆಯನ್ನು ತೋರಿಸುವ ವಿಷಯ, ಅಷ್ಟೇ ಅಲ್ಲದೆ ಇಂತಹ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳಲು ಇತರರಿಗೆ ಪ್ರೋತ್ಸಾಹ ನೀಡುವ ಯಾವುದೇ ವಿಷಯವನ್ನು ಪೋಸ್ಟ್ ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.
  • ತಿನ್ನುವ ಕಾಯಿಲೆಗಳನ್ನು ತೋರಿಸುವ, ಪ್ರಚಾರ ಮಾಡುವ ಅಥವಾ ಅವುಗಳ ಕುರಿತಾಗಿ ಸೂಚನೆಯನ್ನು ಒದಗಿಸುವ ಯಾವುದೇ ವಿಷಯವನ್ನು ಪೋಸ್ಟ್ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.
  • ನಿರ್ದಿಷ್ಟ ವ್ಯಕ್ತಿಯ ವಿರುದ್ಧದ ದೈಹಿಕ ಹಾನಿಯ ಬೆದರಿಕೆಗಳು ಸೇರಿದಂತೆ ಇತರ ವ್ಯಕ್ತಿಗಳನ್ನು ಬೆದರಿಸಬೇಡಿ ಅಥವಾ ಹೆದರಿಸಬೇಡಿ.
  • ಆಯುಧಗಳು, ಬಾಂಬ್‍ಗಳು, ಮಾದಕ ವಸ್ತುಗಳು ಅಥವಾ ಕಾನೂನಿಂದ ನಿಷೇಧಿಸಲ್ಪಟ್ಟಿರುವ ಯಾವುದೇ ಇತರ ನಿಯಂತ್ರಿತ ಸರಕುಗಳನ್ನುಮಾರಾಟ ಮಾಡಲು ಅಥವಾ ಅವುಗಳ ಬಳಕೆಯನ್ನು ಪ್ರೋತ್ಸಾಹಿಸಲು TikTok ಅನ್ನು ಬಳಸಬೇಡಿ.
  • ಆನ್‍‍ಲೈನ್ ಜೂಜು ಅಥವಾ ಇತರ ಹಣಕಾಸಿನ ಸ್ಕೀಮ್‍ಗಳನ್ನು ಪ್ರೋತ್ಸಾಹಿಸಲು ಅಥವಾ ಪ್ರಚಾರ ಮಾಡಲು TikTok ಅನ್ನು ಬಳಸಬೇಡಿ.
  • ಕಾನೂನುಬಾಹಿರ ಚಟುವಟಿಕೆಗಳನ್ನು ಒಳಗೊಂಡಿರುವ ಯಾವುದೇ ವಿಷಯವನ್ನು ಪೋಸ್ಟ್ ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.

ಗ್ರಾಫಿಕ್ ಅಥವಾ ಆಘಾತಕಾರಿ ವಿಷಯ

ಗ್ರಾಫಿಕ್ ರೂಪದ, ಹಿಂಸೆಯ, ಆಘಾತಕಾರಿ ಅಥವಾ ದಿಗ್ಭ್ರಮೆ ಹುಟ್ಟಿಸುವ ವಿಷಯಕ್ಕಾಗಿ TikTok ಬಳಸಬೇಡಿ. ನಿಮ್ಮ ಪೋಷಕರಿಗೆ ಅಥವಾ ಮಕ್ಕಳಿಗೆ ಈವಿಷಯವನ್ನು ತೋರಿಸಲು ನೀವು ಇಷ್ಟಪಡುವುದಿಲ್ಲವಾದರೆ, ಅದನ್ನು ಇಲ್ಲಿ ಪೋಸ್ಟ್ ಮಾಡಬೇಡಿ.

  • ಯಾವುದೇ ಹಿಂಸೆಯ, ಗ್ರಾಫಿಕ್, ಆಘಾತಕಾರಿ ಅಥವಾ ದಿಗ್ಭ್ರಮೆ ಉಂಟುಮಾಡುವ ವಿಷಯವನ್ನು, ಅಲ್ಲದೆ ಹಿಂಸೆಯ ಕೃತ್ಯಗಳನ್ನು ಮಾಡುವ ಹಾಗೆಇತರರನ್ನು ಪ್ರೇರೇಪಿಸುವ ಯಾವುದೇ ವಿಷಯವನ್ನು ಪೋಸ್ಟ್ ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.

ತಾರತಮ್ಯ ಅಥವಾ ದ್ವೇಷದ ಮಾತು

TikTok ಒಂದು ಒಗ್ಗಟ್ಟಿನ ಸಮುದಾಯವಾಗಿದೆ. ಇತರ ಬಳಕೆದಾರರ ವಿರುದ್ಧ ಆಕ್ರಮಣ ಮಾಡುವುದು ಅಥವಾ ಹಿಂಸೆಯನ್ನು ಪ್ರೇರೇಪಿಸುವುದು ಇಲ್ಲಿಸ್ವೀಕಾರಾರ್ಹವಾಗಿರುವುದಿಲ್ಲ.

  • ವ್ಯಕ್ತಿಗಳ ಕುಲ, ಜನಾಂಗೀಯತೆ, ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿ, ಅಸಾಮರ್ಥ್ಯತೆ, ಲೈಂಗಿಕ ದೃಷ್ಟಿಕೋನ, ಲಿಂಗ, ಲಿಂಗ ಗುರುತಿಸುವಿಕೆ, ವಯಸ್ಸು, ಅಥವಾ ಯಾವುದೇ ಇತರ ತಾರತಮ್ಯವನ್ನು ಆಧರಿಸಿ ಜನರ ಗುಂಪಿನ ವಿರುದ್ಧ ದ್ವೇಷವನ್ನು ಪ್ರೇರೇಪಿಸುವ ಯಾವುದೇ ವಿಷಯವನ್ನು ಪೋಸ್ಟ್ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.
  • ಟ್ರೋಲಿಂಗ್ ಅಥವಾ ಪ್ರಚೋದನಕಾರಿ ಟೀಕೆಗಳು ಸೇರಿದಂತೆ ಹಗೆತನವನ್ನು ಪ್ರಚೋದಿಸಬಹುದಾದ ಯಾವುದೇ ವಿಷಯವನ್ನು ಪೋಸ್ಟ್ ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.

ನಗ್ನತೆ ಅಥವಾ ಲೈಂಗಿಕ ಚಟುವಟಿಕೆ

ಲೈಂಗಿಕತೆಯನ್ನು ಅಭಿವ್ಯಕ್ತಪಡಿಸುವ ವಿಷಯ ಅಥವಾ ಲೈಂಗಿಕ ತೃಪ್ತಿಗಾಗಿ ಉದ್ದೇಶಿಸಿರುವ ವಿಷಯಕ್ಕೆ ನಮ್ಮ ಸಮುದಾಯವು ಅವಕಾಶ ನೀಡುವುದಿಲ್ಲ. ನೀವು ಪೋಸ್ಟ್ ಮಾಡುವ ವಿಷಯವು ಸಾರ್ವಜನಿಕವಾಗಿ ಪೋಸ್ಟ್ ಮಾಡಲು ಯೋಗ್ಯವಾಗಿಲ್ಲದಿದ್ದರೆ, ಅದನ್ನು ಪೋಸ್ಟ್ ಮಾಡಬೇಡಿ.

  • ಲೈಂಗಿಕ ಹಲ್ಲೆ, ಲೈಂಗಿಕ ನಿಂದನೆ, ಲೈಂಗಿಕ ಶೋಷಣೆ ಅಥವಾ ಲೈಂಗಿಕ ಹಿಂಸೆಯನ್ನು ಒಳಗೊಂಡಿರುವ, ಪ್ರಚಾರ ಮಾಡುವ ಅಥವಾ ಉತ್ತೇಜಿಸುವಯಾವುದೇ ವಿಷಯವನ್ನು TikTok ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಅಂತಹ ಯಾವುದೇ ವಿಷಯವನ್ನು ಪೋಸ್ಟ್ ಮಾಡಬೇಡಿ.
  • ಯೋಗ್ಯವಲ್ಲದ ವಿಷಯ, ಲೈಂಗಿಕ ವಿಷಯ ಅಥವಾ ನಗ್ನತೆಯನ್ನು ಪೋಸ್ಟ್ ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.
  • ವೇಶ್ಯಾವಾಟಿಕೆ, ಕೋರಿಕೆ ಅಥವಾ ಯಾವುದೇ ಇತರ ಪ್ರಕಾರದ ಲೈಂಗಿಕ ವ್ಯಾಪಾರಕ್ಕೆ ಸಂಬಂಧಪಟ್ಟ ವಿಷಯವನ್ನು ಒದಗಿಸಬೇಡಿ.

ಮಗುವಿನ ಸುರಕ್ಷತೆಯ ಉಲ್ಲಂಘನೆ

TikTok, ಮಗುವಿನ ಸುರಕ್ಷತೆಯ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಮಕ್ಕಳನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವ, ಅವರನ್ನುಗುರಿಯಾಗಿಸುವ ಅಥವಾ ಅವರಿಗೆ ಅಪಾಯವನ್ನುಂಟು ಮಾಡುವ ವಿಷಯವು ನಮ್ಮ ಗಮನಕ್ಕೆ ಬಂದರೆ, ಸೂಕ್ತವಾಗಿರುವಂತೆ ನಾವು ಕಾನೂನು ಜಾರಿವಿಭಾಗಕ್ಕೆ ತಿಳಿಸಬಹುದು ಅಥವಾ ಪ್ರಕರಣಗಳನ್ನು ವರದಿ ಮಾಡಬಹುದು.

  • ಅಪ್ರಾಪ್ತ ವಯಸ್ಕರನ್ನು ಒಳಗೊಂಡಿರುವ ಲೈಂಗಿಕವಾಗಿ ಅಭಿವ್ಯಕ್ತವಾಗಿರುವ ಯಾವುದೇ ವಿಷಯವನ್ನು ಅಥವಾ ಅಪ್ರಾಪ್ತ ವಯಸ್ಕರನ್ನು ಶೋಷಣೆಗೆಒಳಪಡಿಸುವ ವಿಷಯವನ್ನು TikTok ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಅಂತಹ ವಿಷಯವನ್ನು ಪೋಸ್ಟ್ ಮಾಡಬೇಡಿ.
  • ನಗ್ನತೆ, ಲೈಂಗಿಕವಾಗಿ ಸೂಚಿಸುವ ಕೃತ್ಯಗಳು ಅಥವಾ ಅಪ್ರಾಪ್ತ ವಯಸ್ಕರನ್ನು ಒಳಗೊಂಡಿರುವ ಅನುದ್ದೇಶಪೂರ್ವಕವಾದ ಪ್ರಚೋದನಕಾರಿವಿಷಯವನ್ನು ಒಳಗೊಂಡಿರುವ ವೀಡಿಯೊಗಳನ್ನು TikTok ತೆಗೆದುಹಾಕಬಹುದು ಅಥವಾ ಅವುಗಳಿಗೆ ಪ್ರವೇಶವನ್ನು ಸೀಮಿತಗೊಳಿಸಬಹುದು, ಏಕೆಂದರೆ ಇಂತಹ ವೀಡಿಯೊಗಳನ್ನು ನಿರೀಕ್ಷಿಸದಿರುವ ರೀತಿಗಳಲ್ಲಿ ಇತರರು ಬಳಸಬಹುದಾದ ಅಪಾಯವಿರುತ್ತದೆ.
  • ಅಪ್ರಾಪ್ತ ವಯಸ್ಕರೊಂದಿಗೆ ಆನ್‍ಲೈನ್ ಡೇಟಿಂಗ್, ಪರಿಹಾರದ ಡೇಟಿಂಗ್, ಅಪ್ರಾಪ್ತ ವಯಸ್ಕರ ಗೌಪ್ಯತೆಯ ಅತಿಕ್ರಮಣದ ವಿಷಯ ಅಥವಾ ಅಪ್ರಾಪ್ತವಯಸ್ಕರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಅಪಾಯಕ್ಕೆ ಒಳಪಡಿಸುವ ಇತರ ವಿಷಯದ ಕುರಿತಾಗಿ ಯಾವುದೇ ರೀತಿಯಲ್ಲಿ ಪೋಸ್ಟ್ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.
  • ಅಪ್ರಾಪ್ತ ವಯಸ್ಕರಾಗಿರುವ ಬಳಕೆದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಸಾರ್ವಜನಿಕ ಪೋಸ್ಟ್‍‍ಗಳು ಅಥವಾ ಖಾಸಗಿ ಸಂದೇಶಗಳನ್ನುಬಳಸಬೇಡಿ.
  • ನಿಮಗೆ 13 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದರೆ ಅಥವಾ ಸೇವಾ ನಿಯಮಗಳಲ್ಲಿ ನಿಮ್ಮ ದೇಶ ಅಥವಾ ಪ್ರದೇಶಕ್ಕಾಗಿ ಕನಿಷ್ಠ ವಯಸ್ಸು ಭಿನ್ನವಾಗಿದ್ದು, ನಿಮಗೆ ಅಷ್ಟು ಕನಿಷ್ಠ ವಯಸ್ಸಾಗದಿದ್ದರೆ ಆಪ್ ಅನ್ನು ಬಳಸಬೇಡಿ.

ಕಿರುಕುಳ ಅಥವಾ ಸೈಬರ್ ನಿಂದನೆ

ನಮ್ಮೆಲ್ಲಾ ಬಳಕೆದಾರರಿಗೆ ಸಕಾರಾತ್ಮಕ ಪರಿಸರವನ್ನು ಹಾಗೂ ನಿಂದನೆ–ಮುಕ್ತ ಅನುಭವವನ್ನು ಒದಗಿಸಲು ನಾವು ಕಠಿಣ ಪರಿಶ್ರಮ ಮಾಡುತ್ತೇವೆ. ನಿಮ್ಮಮಾತುಕತೆಗಳು ವಿನೀತವಾಗಿರಲಿ ಹಾಗೂ ಎಲ್ಲಾ ಬಳಕೆದಾರರನ್ನು ಗೌರವದಿಂದ ನೋಡಿ.

  • ಇತರ ವ್ಯಕ್ತಿಗಳಿಗೆ ಕಿರುಕುಳ ನೀಡುವ ಉದ್ದೇಶದಿಂದ ಸಾರ್ವಜನಿಕ ಪೋಸ್ಟ್‍ಗಳು ಮತ್ತು/ಅಥವಾ ಖಾಸಗಿ ಸಂದೇಶಗಳನ್ನು ಬಳಸಬೇಡಿ.
  • ವೈಯಕ್ತಿಕವಾಗಿ ಗುರುತಿಸಬಹುದಾದ ಇತರರ ಮಾಹಿತಿಯನ್ನು ಬಹಿರಂಗಪಡಿಸಬೇಡಿ, ಅಂದರೆ ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿಳಾಸ, ID ಸಂಖ್ಯೆ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆ ಇತ್ಯಾದಿ.
  • ಇತರ ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಕೀಳು ಮಾಡಬೇಡಿ, ಅವಮಾನಿಸಬೇಡಿ, ಮಾನನಷ್ಟ ಮಾಡಬೇಡಿ ಅಥವಾ ನಿಂದಿಸಬೇಡಿ, ಅಲ್ಲದೆ ಇತರಬಳಕೆದಾರರು ಹಾಗೆ ಮಾಡುವಂತೆ ಪ್ರೋತ್ಸಾಹಿಸಬೇಡಿ.

ಸೋಗು ಹಾಕುವಿಕೆ, ಸ್ಪ್ಯಾಮ್ ಅಥವಾ ಇತರ ತಪ್ಪುದಾರಿಗೆಳೆಯುವ ವಿಷಯ

ನಮ್ಮ ಸಮುದಾಯವು ಅಧಿಕ ಗುಣಮಟ್ಟವನ್ನು, ತೊಡಗಿಸಿಕೊಳ್ಳುವ ವಿಷಯಕ್ಕೆ ಮೌಲ್ಯವನ್ನು ನೀಡುತ್ತದೆ. ಸ್ಪ್ಯಾಮ್ ಆಗಿರುವ, ಸುಳ್ಳು ಅಥವಾತಪ್ಪುದಾರಿಗೆಳೆಯುವ ವಿಷಯ ಅಥವಾ ವರ್ತನೆಯನ್ನು ತೆಗೆದುಹಾಕಲಾಗುತ್ತದೆ.

  • ನಕಲಿ ಗುರುತುಗಳನ್ನು ರಚಿಸುವ ಮೂಲಕ ಇತರ ವ್ಯಕ್ತಿ ಅಥವಾ ಸಂಘಟನೆಗಳ ರೀತಿ ಸೋಗು ಮಾಡಬೇಡಿ, ಬೇರೊಬ್ಬ ವ್ಯಕ್ತಿ ಅಥವಾ ಸಂಘಟನೆಯಜೊತೆಗಿನ ನಿಮ್ಮ ಸಂಬಂಧದ ಬಗ್ಗೆ ಗೊಂದಲ ಉಂಟಾಗುವ ರೀತಿಯಲ್ಲಿ ಸೋಗು ಮಾಡಬೇಡಿ ಅಥವಾ ಹಣ ಮಾಡಲು ದಾರಿತಪ್ಪಿಸುವ ವಿಷಯವನ್ನುಪೋಸ್ಟ್ ಮಾಡಬೇಡಿ.
  • ವ್ಯಾಪಾರ ಗುಣಲಕ್ಷಣದ ಕಾಮೆಂಟ್‍ಗಳು, ಕಾಮೆಂಟ್‍ಗಳನ್ನು ಬರೆಯಲು ಇತರರನ್ನು ನೇಮಿಸುವುದು ಅಥವಾ ನೇಮಕಗೊಳ್ಳುವುದು, ಪುನರಾವರ್ತಿತವಿಷಯವನ್ನು ಹಂಚಿಕೊಳ್ಳುವುದು, ಸರಪಳಿ ಪತ್ರಗಳನ್ನು ಕಳುಹಿಸುವುದು ಮತ್ತು ವೀಕ್ಷಣೆಗಳು, ಇಷ್ಟಗಳು ಅಥವಾ ಕಾಮೆಂಟ್‍ಗಳನ್ನುಪ್ರೋತ್ಸಾಹಿಸಲು ದುರುದ್ದೇಶಪೂರ್ವಕ ಮಾಹಿತಿಯನ್ನು ಬಳಸುವಂತಹ ಯಾವುದೇ ರೀತಿಯ ಕೃತಕ ಟ್ರಾಫಿಕ್ ಅನ್ನು ಸೃಷ್ಟಿಸಬೇಡಿ.

ಬೌದ್ಧಿಕ ಆಸ್ತಿ ಮತ್ತು ಕೆಲಸದ ಸ್ಥಳದ ವಿಷಯ

TikTok ಇದು ಅನನ್ಯ ಮತ್ತು ಮೂಲವಾಗಿರುವ ಸೃಜನಶೀಲತೆ ಮತ್ತು ಅಭಿವ್ಯಕ್ತಿಗಾಗಿ ಇರುವಂತಹ ಸ್ಥಳವಾಗಿದೆ.

  • ಬೇರೊಬ್ಬರ ಕೃತಿಸ್ವಾಮ್ಯಗಳು, ಟ್ರೇಡ್‍ಮಾರ್ಕ್‍ಗಳು ಅಥವಾ ಇತರ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ವಿಷಯವನ್ನು ಪೋಸ್ಟ್ಮಾಡಬೇಡಿ, ಹಂಚಿಕೊಳ್ಳಬೇಡಿ ಅಥವಾ ಕಳುಹಿಸಬೇಡಿ.
  • ನಿಮ್ಮ ಉದ್ಯೋಗದಾತರ ಆಂತರಿಕ ನೀತಿಗಳನ್ನು ಉಲ್ಲಂಘಿಸುವ ಯಾವುದೇ ಮಾಹಿತಿ ಅಥವಾ ವಿಷಯವನ್ನು ಪೋಸ್ಟ್ ಮಾಡಬೇಡಿ.

ಇತರ ದುರುದ್ದೇಶಪೂರ್ವಕ ಚಟುವಟಿಕೆ

ಮೇಲೆ ವಿವರಿಸಿರುವ ವಿಷಯ ಮತ್ತು ವರ್ತನೆಗೆ ಹೆಚ್ಚುವರಿಯಾಗಿ, TikTok ಸೇವೆಯನ್ನು ದುರ್ಬಲಗೊಳಿಸುವ ಚಟುವಟಿಕೆಯನ್ನು ನಮ್ಮ ನೀತಿಗಳುನಿಷೇಧಿಸುತ್ತವೆ.

  • TikTok ನ ದೈನಂದಿನ ಕಾರ್ಯಾಚರಣೆಯೊಂದಿಗೆ ಹಸ್ತಕ್ಷೇಪ ಮಾಡಬೇಡಿ, ಅದರ ವೆಬ್‍ಸೈಟ್ ಅಥವಾ ಸಂಯೋಜಿತ ನೆಟ್‍ವರ್ಕ್‍ಗಳನ್ನು ಹ್ಯಾಕ್ಮಾಡಬೇಡಿ ಅಥವಾ ಬಳಕೆದಾರರ ಎಕ್ಸೆಸ್ ಅನ್ನು ನಿರ್ಬಂಧಿಸಲು ಇರುವ ಅದರ ಕ್ರಮಗಳನ್ನು ಕಡೆಗಣಿಸಬೇಡಿ.
  • ವೈರಸ್‍ಗಳು, ಟ್ರೋಜನ್‍ಗಳು, ವರ್ಮ್‍ಗಳು, ಲಾಜಿಕ್ ಬಾಂಬ್‍ಗಳು, ಅಥವಾ ದುರುದ್ದೇಶಪೂರ್ವಕವಾಗಿರುವ ಅಥವಾ ತಾಂತ್ರಿಕವಾಗಿಹಾನಿಕಾರಕವಾದ ಇತರ ವಸ್ತುವನ್ನು ಒಳಗೊಂಡಿರುವ ಫೈಲ್‍ಗಳನ್ನು ವಿತರಿಸಬೇಡಿ.
  • ಯಾವುದೇ ಫೈಲ್‍ಗಳು, ಕೋಷ್ಟಕಗಳು ಅಥವಾ ಸಾಕ್ಷ್ಯ ಸಂಕಲನ ಸೇರಿದಂತೆ TikTok ಅನ್ನು ಆಧಾರವಾಗಿಟ್ಟುಕೊಂಡು ಯಾವುದೇ ರೀತಿಯಲ್ಲಿಮಾರ್ಪಡಿಸಬೇಡಿ, ಅಳವಡಿಸಬೇಡಿ, ಅನುವಾದಿಸಬೇಡಿ, ರಿವರ್ಸ್ ಎಂಜಿನಿಯರ್ ಮಾಡಬೇಡಿ, ಜೋಡಣೆ ತೆಗೆದುಹಾಕಬೇಡಿ, ಡೀಕಂಪೈಲ್ಮಾಡಬೇಡಿ ಅಥವಾ ಉಪ ಉತ್ಪನ್ನಗಳನ್ನು ರಚಿಸಬೇಡಿ, ಇಷ್ಟೇ ಅಲ್ಲದೆ TikTok ನಲ್ಲಿರುವ ಯಾವುದೇ ಸೋರ್ಸ್ ಕೋಡ್, ಅಲ್ಗಾರಿದಮ್‍ಗಳು, ವಿಧಾನಗಳು ಅಥವಾ ತಂತ್ರಗಳನ್ನು ಮರುಉತ್ಪಾದಿಸಲು ಪ್ರಯತ್ನಿಸಬೇಡಿ.
  • TikTok ನಿಂದ ಮಾಹಿತಿಯನ್ನು ಸಂಗ್ರಹಿಸಲು ಸ್ವಯಂಚಾಲಿತವಾದ ಲಿಪಿಯನ್ನು ಬಳಸಬೇಡಿ.

ಅದ್ಭುತವಾದ ಸಮುದಾಯ ಸದಸ್ಯರಾಗಿರುವ ಹಾಗೂ ಎಲ್ಲಾ ಬಳಕೆದಾರರಿಗೆ ಸುರಕ್ಷಿತ ಮತ್ತು ಆನಂದದಿಂದ ಕೂಡಿದ ಸ್ಥಳವನ್ನು ಕಾಪಾಡಲು ನಿಮ್ಮಕೈಲಾದಷ್ಟು ಪ್ರಯತ್ನ ಮಾಡುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು. ನಿಮಗೆ ಕಾಣಿಸುವ ಯಾವುದಾದರೂ ವಿಷಯವು ನಮ್ಮ ಯಾವುದೇ ಸಮುದಾಯಮಾರ್ಗಸೂಚಿಯನ್ನು ಉಲ್ಲಂಘಿಸುತ್ತಿದೆ ಎಂದು ನಿಮಗನಿಸಿದರೆ, ದಯವಿಟ್ಟು ಅದನ್ನು ನಮಗೆ ವರದಿ ಮಾಡಿ, ಹೀಗೆ ವರದಿ ಮಾಡಿದಾಗ ನಾವು ಅದನ್ನುಪರಿಶೀಲಿಸುತ್ತೇವೆ ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ. ನೀವು ಇನ್ನೂ ಹೆಚ್ಚಿನ ಕಾಳಜಿಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನುprivacy@tiktok.com ಎಂಬಲ್ಲಿ ಸಂಪರ್ಕಿಸಿ.

Updated on April 15, 2019

Was this article helpful?